HI-FI HOUSE- Villa Leopoldo in France

ಮುಖೇಶ್ ಅಂಬಾನಿಯ ಮನೆ ಪ್ರಪಂಚದ ಅತ್ಯಂತ ಕಾಸ್ಟ್ಲಿ ಮನೆಯೇ ಆಗಿರಬಹುದು. ಆದ್ರೆ ಮುಖೇಶನ ಮನೆಗಿಂತ ದೊಡ್ಡದಾಗಿ ಮತ್ತು ಕಡಿಮೆ ಖರ್ಚಿನಲ್ಲಿ ಕಟ್ಟಿದಂತಹ ಅರಮನೆಯಂತ ಮನೆಗಳು ಅನೇಕ. ಅವುಗಳಲ್ಲಿ ಫ್ರಾನ್ಸ್ ನ ಲಿಯೋಪೊಲ್ಡೊ ಕೂಡ ಒಂದು.



ಇದು ಫ್ರಾನ್ಸನ ಐತಿಹಾಸಿಕ ಸುಪ್ರಸಿದ್ದ ಅರಮನೆ ಲಿಯೋಪೊಲ್ಡೊ ವಿಲ್ಲಾ . ಇದು ಫ್ರಾನ್ಸ್ ನ ಕೋಟ್ ಡಿ ಅಜೂರ್ ಎಂಬ ದಟ್ಟ ಕಾನನದ ನಡುವೆ ಸ್ಥಾಪಿತವಾಗಿದೆ. 1902ರಲ್ಲಿ ಬೆಲ್ಜಿಯಂನ ರಾಜ ಎರಡನೇ ಲಿಯೋಪೊಲ್ಡೊ, ಈ ಬೃಹತ್ ಬಂಗಲೆಯನ್ನ ಕಟ್ಟಿಸಿದ. ತುಂಬಾ ಶ್ರೀಮಂತನಾಗಿದ್ದ

ಈ ರಾಜಾ ಬೆಲ್ಜಿಯಂನಲ್ಲಿದ್ದ ತನ್ನೆಲ್ಲಾ ಆಸ್ತಿಯನ್ನ ಮಾರಿಕೊಂಡು ಫ್ರಾನ್ಸ್ ಗೆ ಬಂದಿದ್ದ. ಅಷ್ಟೂ ದುಡ್ಡನ್ನ ಸುರಿಸಿ ಈ ಬೃಹತ್ ಬಂಗಲೆಯನ್ನ ಕಟ್ಟಿಸಿದ್ದ.

ಈ ಅರಮನೆಯಲ್ಲಿ ಏನುಂಟು ಏನಿಲ್ಲ. ಹೈಟೆಕ್ ಸ್ವಿಮ್ಮಿಂಗ್ ಪೂಲ್, ಸಿನಿಮಾ ಥಿಯೇಟರ್ ಜೊತೆಗೆ ಅಚ್ಚುಕಟ್ಟಾದ ಒಂದು ಆಟದ ಅಂಕಣವೂ ಇದೆ. ಅಂದ್ಹಾಗೆ ಈ ಮನೆ 80 ಸಾವಿರ ಚದರ ಅಡಿ ವಿಸ್ತೀರ್ಣವನ್ನ ಹೊಂದಿದೆ.

ಆ ಕಾಲದಲ್ಲಿ ಈ ಅರಮನೆಯನ್ನ ಕಟ್ಟಲು ಎಷ್ಟು ಖರ್ಚಾಯಿತೋ ಗೊತ್ತಿಲ್ಲ. ಆದ್ರೆ ಪ್ರಸ್ತುತ ಈ ಬಂಗಲೆಯ ಬೆಲೆ ಎರಡು ಸಾವಿರದ ಮುನ್ನೂರು ಕೋಟಿ. ಈಗ ಈ ಅರಮನೆಯ ಒಡೆಯ ಫ್ರಾನ್ಸ್ ನ ಬ್ಯಾಂಕ್ ಉದ್ಯಮಿ ಎಡ್ಮಂಡ್ ಸಫಿರಾ. ಮುಂದಿನ ಬಾರಿ ಈ ಮನೆಯ ಹರಾಜಿಗಾಕಿದಾಗ ನೀವು ಒಂದು ಕೈ ನೋಡಬಹುದು.
!-- Facebook share button Start -->