HI-FI House - Mukesh Ambani House in Mumbai


ಮನೆಕಟ್ಟಿ ನೋಡು ಮದ್ವೆ ಮಾಡಿ ನೋಡು ಅನ್ನೋದು ನಾನ್ನುಡಿ. ಇಂದಿನ ಕಾಲದಲ್ಲಿ ಕೋರ್ಟ್ ನಲ್ಲಿ ಒಂದು ಸೈನ್ ಮಾಡಿ ಕ್ಷಣಮಾತ್ರದಲ್ಲೇ ಮದ್ವೆಮಾಡ್ಕೋ ಬಹುದು. ಆದ್ರೆ ಈ ಮನೆಕಟ್ಟೋದಿದೆಯಲ್ಲಾ ಅದು ಕಷ್ಟಸಾಧ್ಯವೇ ಸರಿ. ಅಂತದ್ರಲ್ಲಿ ದುಡ್ಡಿದ್ದವರಂತೂ ಕೋಟಿಗಟ್ಟಲೆ ಹಣ ಸುರಿದು ಅರಮನೆಯಂತ ಮನೆಕಟ್ಟಿಕೊಂಡಿರ್ತಾರೆ. ಅಂತಹ ಕಾಸ್ಟ್ಲಿ ಮನೆಗಳ ಪರಿಚಯ ಇಲ್ಲಿದೆ.




ಅಂಬಾನಿಗಳ ಫ್ಯಾಮಿಲಿಯಾರಿಗೆ ಗೊತ್ತಿಲ್ಲ ಹೇಳಿ. ಅವ್ರು ಏನ್ ಮಾಡಿದ್ರೂ ಅದು ಸುದ್ದಿಯೇ, ಏನ್ ಮುಟ್ಟಿದ್ರೂ ಅದು ಚಿನ್ನವೇ ಅನ್ನೋವಷ್ಟು ಫೇಮಸ್ಸು. ಅಂತದ್ರಲ್ಲಿ ಮುಖೇಶ್ ಅಂಬಾನಿಯ ಮನೆಯೆಂತದ್ದು ಗೊತ್ತಾ.. ಸ್ವರ್ಗಕ್ಕೆ ಕಿಚ್ಚುಹಚ್ಚೋವಂತ ಅದ್ಭುತ ಮನೆಕಟ್ಟಿದ್ದಾನೆ ಈತ. ಅದೂ ಕೂಡ ಮುಂಬೈನಲ್ಲಿ. ಇಂತ ಐಷಾರಾಮಿ ಮನೆಗೆ ತಗುಲಿದ ವೆಚ್ಚವೆಷ್ಟು ಗೊತ್ತಾ ಜಸ್ಟ್ ನಾಲ್ಕು ಸಾವಿರದ ಐನೂರು ಕೋಟಿ



 ಪ್ರಪಂಚದ ಐದನೇ ರಿಚ್ಚೆಸ್ಟ್ ಪರ್ಸನ್ ಮುಖೇಶ್ ಅಂಬಾನಿ. ಈತನ ಮನೆಯಲ್ಲಿ ಲಕ್ಷ್ಮೀ ಕಾಲು ಮುರಿದುಕೊಂಡು ಬಿದ್ದಂತಿದೆ. ಈತ ಯಾವ ಕೆಲಸಕ್ಕೆ ಕೈಹಾಕಿದ್ರೂ, ಲಾಟರಿ ಹೊಡೆದಂತ ದುಡ್ಡು ಬರ್ತಾನೇ ಇರುತ್ತೆ. ಅದಕ್ಕಾಗೇ ಈತ ಒಂದು ಸುಂದರ ಮನೆ ಅಲ್ಲಲ್ಲ ಅರಮನೆಯನ್ನೇ ಕಟ್ಟಿಕೊಂಡಿದ್ದಾನೆ. ದಕ್ಷಿಣ ಮುಂಬೈನ ಅತ್ಯಂತ ಕಾಸ್ಟಿ ಏರಿಯಾವಾದ ಅಲ್ಟಾಮಾಂಟ್ ರಸ್ತೆಯಲ್ಲಿ ಈತ ಮನೆಯಿದೆ. ಮನೆಯ ಹೆಸ್ರು ಅಂತಿಲಿಯಾ ಅಂತ.

ಮುಖೇಶನ ಈ ಮಹಲು ಕಟ್ಟಲು ತಗುಲಿದ ಖರ್ಚು ಬರೋಬ್ಬರಿ 4 ಸಾವಿರದ ಐನೂರು ಕೋಟಿಗಿಂತಲೂ ಹೆಚ್ಚು ಅಂದ್ರೆ ಅಚ್ಚರಿಯಾಗುತ್ತೆ. ಇದೀಗ ಈ ಮನೆ ಹೊಸ ದಾಖಲೆಯನ್ನೇ ಸೃಷ್ಟಿಸಿದೆ. ಪ್ರಪಂಚದ ಅತ್ಯಂತ ಕಾಸ್ಟ್ಲಿ ಮನೆ ಅಂತ ಕರಿಸಿಕೊಳ್ಳೋ ಮೂಲಕ. ಈ ಹಿಂದ ಲಕ್ಷ್ಮೀ ಪುತ್ರ ಲಕ್ಷ್ಮೀ ಮಿತ್ತಲ್ ಎರಡು ಸಾವಿರ ಕೋಟಿ ಖರ್ಚು ಮಾಡಿ ಮನೆ ಕಟ್ಟಿದ್ರು. ಇದೀಗ ಮುಖೇಶ್, ಲಕ್ಷ್ಮೀ ಮಿತ್ತಲ್ ಗಿಂತ ದುಪ್ಪಟ್ಟು ಖರ್ಚು ಮಾಡಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.


ನಾಲ್ಕುವರೆ ಸಾವಿರ ಕೋಟಿ ಖರ್ಚು ಮಾಡಿಕಟ್ಟಿದ ಈ ಮನೆಯಲ್ಲಿ ಅಂಥದ್ದೇನಿದೆ ಅನ್ನೋ ಪ್ರಶ್ನೆ ಎಲ್ಲರನ್ನ ಕಾಡೋದು ಸಹಜ. ಆದ್ರ ಈ ಮನೆಯಲ್ಲಿ ಏನಿಲ್ಲ ಅಂತ ಕೇಳಿ. ಆರೋಗ್ಯ ಕೇಂದ್ರ, ಪ್ರೈವೇಟ್ ಜಿಮ್, ಡಾನ್ಸ್ ಸ್ಟೂಡಿಯೋ, ಗೆಸ್ಟ್ ಹೌಸ್, ಸುಂದರ ಲೌಂಜ್ ಗಳು, 50 ಮಂದಿ ಕೂತು ವೀಕ್ಷಿಸಬಹುದಾದಂತ ಸಿನಿಮಾ ಥಿಯೇಟರ್, ಹೀಗೆ ಒಂದೇ ಎರಡೇ ಒಂದು ಊರಲ್ಲಿರಬೇಕಾದ ಎಲ್ಲಾ ಫೆಸಿಲಿಟಿಗಳು ಒಂದು ಮನೆಯಲ್ಲಿವೆ. ಅಷ್ಟೇ ಅಲ್ದೆ ಮುಖೇಶ್ ಮನೆಯ ಮೇಲ್ಛಾವಣಿಯಲ್ಲಿ ಮೂರು ಹೆಲಿಪ್ಯಾಡ್ ಗಳಿವೆ. ಮುಖೇಶ್ ಮನೆಯ ಕಾರ್ ಪಾರ್ಕಿಂಗ್ ನಲ್ಲಿ ಕಮ್ಮಿಯೆಂದ್ರೂ 160 ಕಾರ್ ಗಳನ್ನ ನಿಲ್ಲಸಬಹುದು.


ಇಷ್ಟೇಲ್ಲಾ ಫೆಸಿಲಿಟಿಗಳಿರುವ ಈ ಮನೆಯ ಸುತ್ತಳತೆ ಎಷ್ಟಿರಬಹುದು ಅಂದ್ರಾ.. 37 ಸಾವಿರ ಚದರ ಮೀಟರ್ ಗಳು. ಅಂದ್ರೆ ಮುಖೇಶ್ ನ ಮನೆ ವರ್ಸೈಲ್ಸ್ ಅರಮನೆಗಿಂತ ಹೆಚ್ಚಿನ ಜಾಗವನ್ನ ಆವರಿಸಿಕೊಂಡಿದೆ. 27 ಅಂತಸ್ತಿರುವ ಈ ಮನೆ ಒಟ್ಟು 570 ಅಡಿ ಉದ್ದವಿದೆ. ಇಂತಹ ಭರ್ಜರಿ ಬಂಗಲೆಗಳನ್ನ ನೋಡಿ, ಉಳ್ಳವರು ಏನೇನೋ ಮಾಡುವರು ಅಂತ ಸುಮ್ಮನಾಗಬೇಕಷ್ಟೇ..  


!-- Facebook share button Start -->