Powerful Five- Jayalalitha

ದಿ ಆಕ್ಟ್ರೆಸ್ ಟರ್ನಡ್ ಪವರ್ ಫುಲ್ ಪಾಲಿಟೀಷಿಯನ್. ಬಣ್ಣದ ಬದುಕಿನ ಮೂಲಕವೇ ರಾಜಕೀಯಕ್ಕೆ ಕಾಲಿರಿಸಿದ ಧುರೀಣೆ. ಒಂದಲ್ಲ ಎರಡಲ್ಲ ಮೂರು ಬಾರಿ ತಮಿಲು ನಾಡಿನ್ನ ಮುಖ್ಯ ಮಂತ್ರಿಯಾಗಿ ಆಳಿದಾಕೆ. ಆಕೆ ಮತ್ಯಾರು ಅಲ್ಲಾ ಐರನ್ ಲೇಡಿ ಆಫ್ ತಮಿಳುನಾಡು ಜಯಲಲಿತ. 

ಸಿಲ್ಕ್, ಜ್ಯೂವೆಲ್ಲರಿ, ಪೆನ್ಲಿಲ್ಡ್ ಐಬ್ರೋ. ಇದು ಜಯಲಲಿತಾರ ಐಡೆಂಟಿಟಿ. ಒಂದು ಕಾಲದಲ್ಲಿ ತಾಳಕ್ಕೆ ತಕ್ಕಂತೆ ಕುಳಿಯುತ್ತಿದ್ದ ಹಿರೋಯಿನ್ ಜಯಲಲಿತ ಮೂರು ಬಾರಿ ತಮಿಳುನಾಡು ರಾಜಕೀಯವನ್ನ ಕುಣಿಸಿದ್ದಾರೆ. ಮೋಹಕ ಚಲುವೆಯಾಗಿದ್ದ ಜಯಲಲಿತಾರನ್ನ ಬರೀ ನಟಿಯಾಗಿ ನೋಡದೆ, ಇಲ್ಲಿನ ಜನ ಆಕೆಯನ್ನ ರಾಜಕಾರಣಿಯಾಗೂ ಕಂಡಿದ್ದಾರೆ. ಆಕೆ ಸಿ ಸ್ಕ್ವಾಯರ್. ಅಂದ್ರೆ ಒನ್ ಆಫ್ ದಿ ಮೋಸ್ಟ್ ಕಾಂಟ್ರಿವರ್ಷಿಯಲ್ ಆಂಡ್ ಕಲರ್ ಫುಲ್ ಇಂಡಿಯನ್ ಪಾಲಿಟೀಷಿಯನ್ .



ಜಯಲಲಿತಾರ ಜೀವನ ಸಿನಿಮಾಗಳಷ್ಟೇ ಕಲರ್ ಫುಲ್. ಅಣ್ಣಾ ಡಿಎಂಕೆಯ ಅಮ್ಮಾ ಎಂದೇ ಕರೆಯಲ್ಪಡುವ ಜಯಲಲಿತಾ , ಕರುಣಾಜನಕವಾಗಿ ಡಿ.ಎಂಕೆಗೆ ಸೋಲುಣಿಸಿದ್ದಾರೆ. 234 ಕ್ಷೇತ್ರಗಳಲ್ಲಿ ಡಿಎಂಕೆ ಕೇವಲ 32 ಸ್ಥಾನ ಪಡೆದಿದೆ. ಜಯಾಲಲಿತಾ ನೇತೃತ್ವದ ಎಐಎಡಿಎಂಕೆ 202 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ ತಮಿಳುನಾಡಿನ ಗದ್ದುಗೆ ಏರಿದ್ದಾರೆ. ಕಾಲು ಭಾಗವನ್ನೂ ಗೆಲ್ಲಲಾಗದ ಡಿಎಂಕೆ ಸ್ಥಿತಿ ಕರುಣಾಜನಕವಾಗಿದೆ.


ಮೂಲತಃ ಕರ್ನಾಟಕದವರಾದ ಜಯಲಲಿತಾ ಜಯರಾಮ್ 1948ರ ಫೆಬ್ರವರಿ 24ರಂದು ಮಂಡ್ಯ ಜಿಲ್ಲೆ ಮೇಲುಕೋಟೆಯಲ್ಲಿ ಜನಿಸಿದ್ರು. ಆದ್ರೆ ಅವ್ರ ಕರಿಯರ್ ಅಂತ ಶುರುವಾಗಿದ್ದು ತಮಿಳುನಾಡಿನಲ್ಲೇ... ಜಯಲಲಿತಾರ ರಾಜಕೀಯ ಹಾದಿ ಸುಗಮವಾಗಿರಲಿಲ್ಲ. 1999ರಲ್ಲಿ ಈಕೆ ಏಕೈಕ ಮಹಿಳಾ ಸದಸ್ಯೆಯಾಗಿ ಅಸಂಬ್ಲಿಗೆ ಎಂಟ್ರಿಯಾಗಿದ್ರು. ಆಗ ಡಿಎಂಐಸಿ ಯಿಂದ ಅಸೆಂಬ್ಲಿಯಲ್ಲೇ ಜಯಾರ ವಸ್ತ್ರಾಪಹರಣವಾಯ್ತು. ಆದ್ರೂ, ಈಕೆ ಎಲ್ಲಾ ಅಪಮಾನಗಳನ್ನ ಸಹಿಸಿ ಮೇಲೆದ್ದು ಬಂದ ಅಭಿನವ ದ್ರೌಪದಿಯೇ ಸರಿ.



ಶಾಸಕರಾಗಿ, ಪಕ್ಷದ ವಿವಿಧ ಪದಾಧಿಕಾರಿ ಹುದ್ದೆಯಲ್ಲಿ ಸೇವೆಸಲ್ಲಿಸಿದ ಜಯಲಲಿತಾ 1991ರಿಂದ 1996ರವರೆಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡ್ರು. 2002ರಿಂದ 2006 ಎರಡನೇ ಬಾರಿ ಅಧಿಕಾರ ಚಲಾಯಿಸಿದ್ರು. ಇದೀಗ ಲ್ಯಾಂಡ್‌ ಸೈಡ್ ವಿಕ್ಟರಿ ಸಂಪಾದಿಸಿರೋ ಅಮ್ಮ, ಮತ್ತೆ ಸಿಎಂ ಆಗಿದ್ದಾರೆ.




ತಮ್ಮ ಕಲರ್ ಫುಲ್ ಸಾರಿ ಗಳಿಂದ, ಕಲರ್ ಟಿವಿ ಕಾಂಟ್ರವರ್ಸಿಗಳಿಂದ, ಕೆಜಿ ಕೆಜಿ ಬಂಗಾರದ ಸೊಬಗಿನಿಂದ ಅಮ್ಮಾ ಫೇಮಸ್ಸಾದ್ರೂ, ಜನ ಮಾತ್ರ ಜಯಮ್ಮನಿಗೇ ಜೈಕಾರ ಹಾಕಿದ್ದಾರೆ. ಆ ಮೂಲಕ ಮೂರನೇ ಬಾರಿ ಜಯಲಲಿತ ತುಮಿಳು ನಾಡಿದ ಚುಕ್ಕಾಣಿ ಹಿಡಿದಿದ್ದಾರೆ.
!-- Facebook share button Start -->