Deadliest Creatures- Box Jelly Fish

ನಿಸರ್ಗ ನೂರು ಕೋಟಿಗೂ ಹೆಚ್ಚು ಜೀವಸಂಕುಲವಿದೆ. ಒಂದೊಂದು ಜೀವಿಯ ಬದುಕು, ಆಹಾರ, ಆಕಾರ ವಿಭಿನ್ನ, ವಿಶಿಷ್ಟ. ಕೆಲವು ಜೀವಿಗಳು ಮುದ್ದಾಗಿವೆ ಎಂದು ಅಪ್ಪಿಕೊಳ್ಳೋಕೆ ಹೋದ್ರೆ ಅಪಾಯ ಕಟ್ಟಿಟ್ಟಬುತ್ತಿ. ಅಪ್ಪಿತಪ್ಪಿ ಅವುಗಳು ಏನಾದ್ರೂ ನಿಮಗೆ ಮುತ್ತಿಟ್ರೆ ನೀವು ಈ ಲೋಕದಿಂದ ಟಿಕೆಟ್ ಪಡೆಯೋದು ಗ್ಯಾರಂಟಿ. ಅಂತ ಜೀವಿಗಳ ಪರಿಚಯ ಇಲ್ಲಿದೆ. 


ಈ ಜೀವಿಗಳನ್ನ ದೂರದಿಂದಲೆ ನೋಡಿ ದಿಗ್ಭ್ರಮೆಪಡಿ. ಹತ್ತಿರ ನೋಡಬೆಕೆಂಬ ಆಸೆಯಿಂದ ಹೊದ್ರೆ ನಿಮ್ಮ ಜೀವದ ಆಸೆಯೇ ಬಿಡಬೇಕಾದಿತು. ನಾವು ಟಾಪ್ ಪಾಯ್ಸನಸ್ ಫಿಶ್ ಅಂತೇನಾದ್ರು ಅವಾರ್ಡ್ ಕೊಡಲಿಕ್ಕೆ ಹೋದ್ರೆ , ದಿ ಫಸ್ಟ್ ಪ್ರೈಸ್ ಗೋಸ್ ಟು ಬಾಕ್ಸ್ ಜೆಲ್ಲಿ ಫಿಶ್. ಆಹಾ! ನೋಡಲಿಕ್ಕೆ ಇಶ್ಟು ಮುದ್ದಾದ ಜೀವಿ ಅದ್ಹ್ಯೇಗೆ ಜೀವಾ ತೆಗೆಯುತ್ತೆ ಅಂತಿರಾ. ನೋಡಿದ್ರೆ ನೀರಿನ ಗುಳ್ಳೆತರ ಕಾಣೋ ಬಾಕ್ಸ್ ಜೆಲ್ಲಿ ಫಿಶ್ ಈಗಾಗಲೆ 1954 ರಿಂದ ಹಿಡಿದು ಇಲ್ಲಿವರೆಗೂ 5 ಸಾವಿರದ 567 ಜನರ ಜೀವ ತೆಗೆದುಕೊಂಡಿದೆ. ಎಶ್ಟು ಮುದ್ದಾಗಿ ಕಾಣುತ್ತೋ ಅಶ್ಟೇ ಭಯಾನಕ ಸಾವನ್ನ ನೀಡುತ್ತೆ ಈ ಡೆಡ್ಲಿ ಫಿಶ್. ಇದು ಮೋದಲು ಹೃದಯ ಸ್ತಂಭನ ವನ್ನ ನಲ್ಲಿಸೋ ಇದರ ವಿಶ ನಿಧಾನವಾಗಿ ನರಮಂಡಲವನ್ನೇ ಸಾಯುಸುತ್ತದೆ. ಇದರ ವಿಶದಾಳಿಗೆ ತುತ್ತಾದವರು ನರಕವನ್ನೇ ನೋಡುತ್ತಾರೆ.


ಏಶಿಯಾ ಮತ್ತು ಆಸ್ಟ್ರೇಲಿಯಾದ ಸಮುದ್ರದಲ್ಲಿ ಕಂಡುಬರುವ ಬಾಕ್ಸ್ ಫಿಶ್ ವಿಶಕ್ಕೆ ಸಿಕ್ಕು ಬದುಕೋದು ಸಾಧ್ಯವೇ ಇಲ್ಲಾ. ಅದಕ್ಕೆ ಇರಬೇಕು ಮುಖ ನೋಡಿ ಮಣೆ ಹಾಕಬಾದ್ರು ಅನ್ನೋದು.
!-- Facebook share button Start -->