CHOTISI AASHA PART-2...!

೨. ಬ್ರೆಂಡನ್ ಫೋಸ್ಟರ್
ಇದೊಂದು ಕಿನ್ನರನ ಕಥೆ. ೧೧ ವರ್ಷದ ಬ್ರೆಂಡನ್ ಗೆ ತಾನೊಬ್ಬ ಕಿನ್ನರನಾಗಬೇಕು ಎಂಬ ಮಹದಾಸೆ... ಯಾಕಪ್ಪ ಹಾಗೆ ಅಂದ್ರೆ, ನಾನು ಕಿನ್ನರನಾಗಿ ಮನೆಯಿಲ್ಲದವರಿಗೆ ಮನೆಕೊಡುತ್ತೇನೆ...ಅವ್ರು  ತುತ್ತು ಅನ್ನಕ್ಕಾಗಿ ಪರದಾಡದಂತೆ ನೋಡಿಕೊಳ್ಳುತ್ತೇನೆ ಅಂತ ಮುದ್ದು ಮುದ್ದಾಗಿ ಹೇಳುತ್ತಿದ್ದ. ಮತ್ತದು ಅವ್ನ ಕೊನೆಯಾಸೆ ಕೂಡ ಆಗಿತ್ತು.  ಯಾಕಂದ್ರೆ  ಆ ಪುಟ್ಟಪೋರ ಲುಕುಮಿಯಾಗೆ ತುತ್ತಾಗಿದ್ದ .
ಹೀಗೆ ಮುದ್ದು ಮುದ್ದಾಗಿರುವ ಹುಡುಗನ ಹೆಸರು ಬ್ರೆಂಡನ್ ಫೋಸ್ಟರ್ ಅಂತ.  ವಯಸ್ಸು ಬರೀ ಹನ್ನೊಂದು ಆಗಿದ್ರೂ, ಸಾವಿಗೆ ಹತ್ತಿರವಾಗಿಬಿಟ್ಟಿದ್ದ. ಮಾನವನಾಗಿ ಹುಟ್ಟಿದ ಮೇಲೆ ಸಾವು ಬಂದೆ ಬರುತ್ತೇ ನಿಜ, ಆದ್ರೆ ಬ್ರೆಂಡನ್ ಗೆ ಇದು ಬಲು ಬೇಗ ಬಂದಿತ್ತು. ವಯಸ್ಸು  ಚಿಕ್ಕದಾದರು, ಮನಸ್ಸು ದೊಡ್ಡದು. ಸದಾ ಬಡವರನ್ನ ನಿರ್ಗತಿಕರನ್ನ ಕಂಡ್ರೆ ಸಾಕು, ಆತನ ಮನ ಕರಗುತ್ತಿತ್ತು.
ಅಮ್ಮನಿಗೆ ಮಗನ ಸಾವಿನ ಬಗ್ಗೆ ತಿಳಿದಿತ್ತು... ಹೀಗಾಗಿ ಸತ್ತವರೆಲ್ಲ ಏಂಜೆಲ್ ಗಳಾಗುತ್ತರಪ್ಪ ಅಂತ ಕಣ್ಣಿರಾಗುತ್ತಿದ್ದಳು. ಬ್ರೆಂಡನ್ ಗೆ ತಾನು ಏಂಜೆಲ್ ಆಗಬೇಕೆಂಬ ಆಸೆ ಬಲವಾಗತೊಡಗಿತು.. ಮಗು ಹಾಗಂದಾಗಲೆಲ್ಲ ತಾಯಿಗೆ ತಡೆದುಕೊಳ್ಳಲು ಆಗುತ್ತಿರಲಿಲ್ಲ. ಬ್ರೆಂಡನ್ ಗೆ ಬಡವರಿಗಾಗಿ ಏನಾದ್ರು ಮಾಡಬೇಕು ಅನ್ನೋ ಆಸೆ ಹೆಚ್ಚಾಗತೊಡಗಿತು. ಪುಟ್ಟ ಪೋರನ ಈ ಸ್ಟೋರಿಯನ್ನ ಲೋಕಲ್ ಚಾನೆಲ್ ಪ್ರಸರ ಮಾಡಿತು. ಬ್ರೆಂಡನ್ ನ ಮಾತು, ನಡತೆ ಎಷ್ಟೋ ಜನರನ್ನ ಇಂಪ್ರೆಸ್ ಮಾಡಿತು. ಹಲವರು ಬ್ರೆಂಡನ್ ನ ಮಹತ್ತರ ಕೊನೆಯಾಸೆಯನ್ನ ತೀರಿಸಲೇ ಬೇಕು ಅಂತ ಪಣತೊಟ್ಟರು. ಕೆಲವೇ ದಿನಗಳಲ್ಲಿ ಬ್ರೆಂಡನ್ ನ ಕೊನೆಯಸೆ ತೀರುವ ಕಾಲ ಹತ್ತಿರವಾಯ್ತು . ಜನರ ಸಹಕಾರದಿಂದ ಬ್ರೆಂಡನ್ ನ ಹೆಸರಿನಲ್ಲಿ ಊರಲ್ಲೆಲ್ಲ ಅನ್ನದಾಸೋಹಗಳು ನಡೆದವು . 
ಬ್ರೆಂಡನ್ ಅದ್ಯಾವ ಪರಿ ಸುದ್ದಿ ಮಾಡಿದನೆಂದರೆ ವಾಶಿಂಗ್ ಟನ್ ನಿಂದಲೂ ಇತನಿಗೆ ಸಹಾಯ ದೊರೆಯಲಾರಂಭಿಸಿತು . ನೋಡ ನೋಡುತ್ತಿದ್ದಂತೆ ಬ್ರೆಂಡನ್ ಅಂತಾರಾಷ್ಟ್ರೀಯ ಪ್ರಖ್ಯಾತಿ ಪಡೆದ . ಪ್ರಪಂಚದಾದ್ಯಂತ ಬ್ರೆಂಡನ್ ಹೆಸರಿನಲ್ಲಿ ಚಾರಿಟಿಗಳು, ಎನ್.ಜಿ. ಓ ಗಳು ಶುರುವಾದವು. ಹೀಗೆ ಬ್ರೆಂಡನ್ ಬದುಕಿದ್ದಾಗಲೇ ಬಡವರ ಪಾಲಿಗೆ ಏಂಜೆಲ್ ಆಗಿಬಿಟ್ಟ.
ಆದ್ರೆ ದುರದೃಷ್ಟವಶಾತ್ , ದಿನಕಳೆದಂತೆ ಆತ ಕೃಶ ನಾದ . ಕೊನೆಗೆ ನವೆಂಬರ್ ೨೧,೨೦೦೮ ರಂದು ಕೊನೆಯುಸಿರೆಳೆದ ... ಈ ಪುಟ್ಟ ಪೋರ ಆತನ ತಾಯಿ ಮಾತಿನಂತೆ ಕಿನ್ನರನಾಗಿರಬಹುದೇನೋ....!


 Mamata Patil,


!-- Facebook share button Start -->